ಮದ್ದೂರು: ತೊರೆಬೊಮ್ಮನಹಳ್ಳಿ ಗ್ರಾ ಪಂ ಎದುರು ಅತಿಕ್ರಮಿಸಿಕೊಂಡಿರುವ ರಸ್ತೆಯನ್ನು ತೆರವುಗೊಳಿಸುವಂತೆ ಮಠದಹೊನ್ನಾಯಕನಹಳ್ಳಿ ಗ್ರಾಮಸ್ಥರು ಪ್ರತಿಭಟನೆ
Maddur, Mandya | Oct 9, 2025 ಮದ್ದೂರು ತಾಲ್ಲೂಕು ತೊರೆಬೊಮ್ಮನಹಳ್ಳಿ ಗ್ರಾ.ಪಂ ವ್ಯಾಪ್ತಿಯ ಮಠದಹೊನ್ನಾಯಕನಹಳ್ಳಿ ಗ್ರಾಮದ ರಸ್ತೆಯನ್ನು ಅತಿಕ್ರಮಿಸಿಕೊಂಡಿದ್ದಾರೆಂದು ಆರೋಪಿಸಿ ಗ್ರಾ.ಪಂಗೆ ಮುತ್ತಿಗೆ ಹಾಕಿ ಮಠದಹೊನ್ನಾಯಕನಹಳ್ಳಿ ಗ್ರಾಮಸ್ಥರು ಪ್ರತಿಭಟಿಸಿದರು. ಮಠದಹೊನ್ನಾಯಕನಹಳ್ಳಿ ಗ್ರಾಮದ ಕಂಡಕ್ಟರ್ ನಿಜಲಿಂಗಯ್ಯ ಅವರು ಮನೆ ನಿರ್ಮಾಣ ಮಾಡುತ್ತಿದ್ದು, ರಸ್ತೆಯನ್ನು ಅತಿಕ್ರಮಿಸಿಕೊಂಡು ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿದ್ದಾರೆಂದು ಆರೋಪಿಸಿ ಗ್ರಾ.ಪಂಗೆ ಮುತ್ತಿಗೆ ಹಾಕಿ ಪಿಡಿಓ ವಿರುದ್ದ ಪ್ರತಿಭಟಿಸಿದರು. ಕಳೆದ 6 ತಿಂಗಳ ಹಿಂದೆಯಿಂದಲೂ ರಸ್ತೆಯನ್ನು ಮನೆ ಮಾಡುವ ನೆಪದಲ್ಲಿ ಅತಿಕ್ರಮಿಸಿಕೊಂಡಿದ್ದಾರೆ. ಇದರ ಬಗ್ಗೆ ಗ್ರಾ.ಪಂಗೆ, ತಾ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಿದರ