ಬೆಂಗಳೂರು ಉತ್ತರ: ಕಲ್ಯಾಣ ಕರ್ನಾಟಕದಲ್ಲಿ ಪ್ರವಾಹ; ಒಂದು ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ: ನಗರದಲ್ಲಿ ಅಜಯ್ ಸಿಂಗ್
ಕಲ್ಯಾಣ ಕರ್ನಾಟಕದಲ್ಲಿ ಪ್ರವಾಹ ವಿಚಾರಕ್ಕೆ ಸಂಬಂಧಿಸಿ ಸೋಮವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಸದಾಶಿವನಗರದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಕೆಕೆ ಆರ್ ಡಿಬಿ ಅಧ್ಯಕ್ಷ, ಶಾಸಕ ಅಜಯ್ ಸಿಂಗ್ ಅವರು, ನಾಳೆ ಸಿಎಂ ಅವರು ವೈಮಾನಿಕ ಸಮೀಕ್ಷೆ ಕೈಗೊಂಡಿದ್ದಾರೆ, ನಾನು ಸಹ ಈಗ ಅಲ್ಲಿಂದಲೆ ಬಂದಿದ್ದು. ನಿನ್ನೆ ಸಾಯಂಕಾಲವರೆಗೆ ಬ್ರಿಡ್ಜ ಮೇಲೆ ಕೂಡ ನೀರು ಇತ್ತು. ರಾತ್ರಿಯಿಂದ ನೀರು ಕಡಿಮೆಯಾಗಿದೆ ಎಂದರು. ಒಂದು ಲಕ್ಷ ಹೆಕ್ಟೇರ್ ಬೆಳೆ ಹನಿಯಾಗಿದೆ ಅಂತ ಸಮೀಕ್ಷೆ ಮಾಡಲಾಗಿದೆ. ಮೂರು ಲಕ್ಷ ಹೆಕ್ಟೇರ್ ಹಾನಿಯಾಗಿರಬಹುದು ಎಂದು ಅಂದಾಜಿಸಲಾಗಿದೆ. ಅದಕ್ಕೆ ಸಿಎಂ ಸಿದ್ದರಾಮಯ್ಯ ಅವರು ನಾಳೆ ಬರ್ತಾರೆ, ಸಭೆ ಕೂಡ ನಡೆಸಲಿದ್ದಾರೆ ಎಂದರು.