ಮಳವಳ್ಳಿ : ಪಟ್ಟಣದಲ್ಲಿ ಡಿ 16 ರಿಂದ ಆರಂಭವಾಗಲಿರುವ ಸುತ್ತೂರಿನ ಆದಿ ಜಗದ್ಗುರು ಶ್ರೀ ಶಿವರಾತ್ರಿ ಶಿವಯೋಗಿರವರ 1066ನೇ ಜಯಂತಿ ಮಹೋತ್ಸವ ವನ್ನು ಕ್ಷೇತ್ರದ ಪ್ರತಿಯೊಬ್ಬರು ಪಕ್ಷಭೇದ ಮರೆತು ಒಗ್ಗಟ್ಟಿನಿಂದ ಸ್ವಯಂ ಸೇವಕರಂತೆ ಕೆಲಸ ನಿರ್ವಹಿಸಿ ಜಯಂತಿ ಯಶಸ್ವಿಗೆ ಕಂಕಣ ಬುದ್ಧರಾಗೋಣ ಎಂದು ಮಾಜಿ ಸಂಸದರಾದ ಸಿ ಎಸ್ ಪುಟ್ಟರಾಜು ಕರೆ ನೀಡಿದರು. ಕನಕಪುರ ದೇಗುಲ ಮಠದ ಶ್ರೀ ಚನ್ನಬಸವ ಸ್ವಾಮಿಗಳ ದಿವ್ಯ ಸಮುಖದಲ್ಲಿ ಪಟ್ಟಣದ ಸುತ್ತೂರು ಜಯಂತಿ ಕಾರ್ಯಾಲಯಕ್ಕೆ ಮಂಗಳವಾರ ಭೇಟಿ ನೀಡಿ ಜಯಂತಿ ಮಹೋತ್ಸವದ ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಿ ನಂತರ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಮಂಗಳವಾರ ಸಾಯಂಕಾಲ 6.30ರ ಸಮಯದಲ್ಲಿ ಆಗಮಿಸಿ ವೇದಿಕೆ ನಿರ್ಮಾಣದ ಪರಿಶೀಲನೆ ನಡೆಸಿ ಮಾತನಾಡಿದರು.