ಕಲಬುರಗಿ: ಹೊನ್ನಕಿರಣಗಿ ಗ್ರಾಮದಲ್ಲಿ ಜೂಜಾಡುತ್ತಿದ್ದ ಆರು ಜನರ ಬಂಧನ
ಕಲಬುರಗಿ : ಜೂಜಾಡುತ್ತಿದ್ದ ಆರು ಜನರನ್ನ ಬಂಧಿಸಿರೋ ಘಟನೆ ಕಲಬುರಗಿ ತಾಲೂಕಿನ ಹೊನ್ನಕಿರಣಗಿ ಗ್ರಾಮದಲ್ಲಿ ನಡೆದಿದೆ.. ಈ ಬಗ್ಗೆ ಜೂ7 ರಂದು ಮಧ್ಯಾನ 2 ಗಂಟೆಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಫರಹತ್ತಬಾದ್ ಠಾಣೆ ಪೊಲೀಸರು ಹೊನ್ನಕಿರಣಗಿ ಗ್ರಾಮದ ಮೇಗಮ್ಮ ದೇವಸ್ಥಾನದ ಬಳಿ ಜೂಜುಅಡ್ಡೆ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಜೂಜಾಡುತ್ತಿದ್ದ ಸಂಗಪ್ಪ, ಶಾಂತಪ್ಪ, ಶಿವಲಿಂಗಪ್ಪ, ವಿರೇಶ್, ಮಡಿವಾಳಪ್ಪ, ನಾಗು ಸೇರಿದಂತೆ ಆರು ಜನ ಜೂಜಾಡುತ್ತಿದ್ದವರನ್ನ ಬಂಧಿಸಿದ್ದಾರೆ. ಇನ್ನೂ ಬಂಧಿತರಿಂದ ₹12350 ರೂ ನಗದು ಹಣವನ್ನ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಫರಹತ್ತಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.