Public App Logo
Jansamasya
News
पुलिस
Bjp
National
Bihar
बिहार
कांग्रेस
बीजेपी
विधायक
Congress
Modi
Delhi
Viral
Odisha
Rajasthan
अमित_शाह
दिल्ली
Breakingnews
Narendramodi
Madhya_pradesh
Ipl
Rahulgandhi
Haryana
Cricket
शादी
Crimenews
Kolkata
Aap
China

ಕಲಬುರಗಿ: ಪೆರೋಲ್ ಅವಧಿ ಮೀರಿ 1 ದಿನ ತಡವಾಗಿ ಜೈಲಿಗೆ ವಾಪಸ್ ಬಂದರೂ 2 ವರ್ಷ ಹೆಚ್ಚುವರಿ ಜೈಲು ಶಿಕ್ಷೆ: ನಗರದಲ್ಲಿ ನ್ಯಾಯಾಧೀಶರ ಸ್ಪಷ್ಟ ಸಂದೇಶ

Kalaburagi, Kalaburagi | Nov 30, 2025
ನಗರದ ಕೇಂದ್ರ ಕಾರಾಗೃಹದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಕಾರಾಗೃಹ ಸಂಯುಕ್ತ ಆಶ್ರಯದಲ್ಲಿ ಶಿಕ್ಷಾಬಂದಿಗಳಿಗೆ ಪೆರೋಲ್ ಬಗ್ಗೆ ಅರಿವು ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿ ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀನಿವಾಸ ನವಲೆ ಅವರು ಪಾಲ್ಗೊಂಡು ಪೆರೋಲ್ ಅವಧಿಯಲ್ಲಿ ನಿಗದಿತ ದಿನಾಂಕಕ್ಕೆ ವರದಿ ಮಾಡುವುದು ಕಡ್ಡಾಯ, ನಿಗಧಿತ ಅವಧಿ ಮೀರಿ 1 ದಿನ ತಡವಾದರೂ 2 ವರ್ಷದ ಹೆಚ್ಚುವರಿ ಶಿಕ್ಷೆ ವಿಧಿಸಲಾಗುತ್ತದೆ ಎಂದು ಎಚ್ಚರಿಸಿದರು. ಮುಖ್ಯ ಅಧೀಕ್ಷಕಿ ಡಾ. ಅನೀತಾ ಆರ್. ಅವರು, ಸಾಮಾನ್ಯ ಮತ್ತು ತುರ್ತು ಪೆರೋಲ್ ಬಗ್ಗೆ ಮಾಹಿತಿ ನೀಡಿ, 1 ರಿಂದ 3 ತಿಂಗಳವರೆಗೆ ವಿಸ್ತರಣೆಯ ಅವಕಾಶವಿದೆ ಎಂದರು. 2 ವರ್ಷಗಳ ವಿಚಾರಣಾ ಅವಧಿ ಪೂರೈಸಿದ ಬಂದಿಗಳಿಗೆ ಮಾತ್ರ ಪೆರೋಲ್ ದೊರೆಯುತ್ತದೆ ಎಂದು ತಿಳಿಸಿದರು.