ವಿಕಲಚೇತನರಿಗೆ ಅವರ ಹಕ್ಕುಗಳ ಬಗ್ಗೆ ತಿಳಿಸಲು, ಸಮಾಜದಲ್ಲಿ ಅವರಿಗೂ ಸಮಾನ ಬದುಕುವ ಅವಕಾಶ ಇದೆ ಅವರೂ ಯಾರಿಗೂ ಕಡಿಮೆ ಇಲ್ಲ, ವಿಶೇಷ ಚೇತನರನ್ನು ನಾವು ಗೌರವಿಸಬೇಕೆಂದು ಶಿಕ್ಷಕರಾದ ಸೂಗುರೇಶ ಅವರು ಹೇಳಿದರು. ರಾಯಚೂರು ತಾಲ್ಲೂಕಿನ ಡಿ.ಯದ್ಲಾಪುರ ಗ್ರಾಮದಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾದ ಬಂದೇನವಾಜ್ ಅವರ ಅಧ್ಯಕ್ಷತೆಯಲ್ಲಿ ಶ್ರೀ ಪುಟ್ಟರಾಜ ಗವಾಯಿಗಳ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.