ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಹೆಚ್ಚಾದ ಮಳೆಯ ಅಬ್ಬರ ಬಯಲು ಸೀಮೆಯಲ್ಲಿಯೂ ಮುಂದುವರೆದಿದ್ದು, ಭಾರಿ ಗಾಳಿ ಮಳೆಗೆ ಮನೆಯ ಮೇಲೆ ಉರುಳಿದ ಬೃಹತ್ ಗಾತ್ರದ ಮರವೊಂದು ಗುಡ್ಡದಹಳ್ಳಿ ಗ್ರಾಮದಲ್ಲಿ ಮನೆ ಮೇಲೆ ಬಿದ್ದಿದೆ. ರವಿ ಎಂಬುವರಿಗೆ ಸೇರಿದ ಮನೆ ಇದಾಗಿದ್ದು, ಎಲ್ಲರೂ ಮಲಗಿದ್ದ ವೇಳೆ ಮರ ಬಿದ್ದಿದೆ. ಮರ ಬಿದ್ದ ರಭಸಕ್ಕೆ ಮನೆಯಿಂದ ಕುಟುಂಬಸ್ಥರು ಹೊರಬಂದಿದ್ದು ಜೀವ ಹಾನಿ ತಪ್ಪಿದೆ.