ಕೋಲಾರ: ನ.5 ವಕ್ಕಲಿಗರ ಸಂಘದಿಂದ ವಸತಿನಿಲಯಕ್ಕೆ ಶಿಲಾನ್ಯಾಸ: ನಗರದಲ್ಲಿ ರಮೇಶ್
Kolar, Kolar | Nov 4, 2025 ನ.5 ವಕ್ಕಲಿಗರ ಸಂಘದಿಂದ ವಸತಿನಿಲಯಕ್ಕೆ ಶಿಲಾನ್ಯಾಸ: ನಿರ್ಮಲಾನಂದನಾಥ ಶ್ರೀಗಳು ಭಾಗಿ ಕೋಲಾರ:- ಶೈಕ್ಷಣಿಕ ಅಭಿವೃದ್ಧಿಗೆ ಅತ್ಯುತ್ತಮ ಹಾಗೂ ಸುಸಜ್ಜಿತ ಸೌಲಭ್ಯಗಳುಳ್ಳ ವಸತಿ ನಿಲಯ ನಿರ್ಮಾಣಕ್ಕೆ ನವೆಂಬರ್ 5 ರ ಬುಧವಾರ ಬೆಳಗ್ಗೆ ಕೋಲಾರದ ಸಿ.ಬೈರೇಗೌಡ ನಗರದಲ್ಲಿ ಬೆಳಗ್ಗೆ 9 ಗಂಟೆಗೆ ಗುದ್ದಲಿಪೂಜೆ ಹಾಗೂ 10.30 ಕ್ಕೆ ನಂದಿನಿ ಪ್ಯಾಲೇಸ್ನಲ್ಲಿ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಡಾ.ಡಿ.ಕೆ.ರಮೇಶ್ ತಿಳಿಸಿದರು. ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಮಧ್ಯಾಹ್ನ 12 ಗಂಟೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿ, ವೇದಿಕೆ ಕಾರ್ಯಕ್ರಮದಲ್ಲಿ ” ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ವಿದ್ಯಾರ್ಥಿಗಳನ್ನು ಅಭಿನಂದಿಸಲಾಗುವುದು. ಅಲ್ಲದೆ ಕೃಷಿ,