ಶಿರಸಿ: ಶ್ರೀ ಕ್ಷೇತ್ರ ಮಂಜ್ಗುಣಿಗೆ ಸ್ವರ್ಣವಲ್ಲೀಯ ಉಭಯ ಶ್ರೀಗಳು ಭೇಟಿ
ಶಿರಸಿ: ಚಾತುರ್ಮಾಸ್ಯ ವ್ರತಾಚರಣೆ ಸಂಕಲ್ಪಕ್ಕೂ ಮೊದಲು ಪ್ರತಿ ಸಂವತ್ಸರದಂತೆ ಈ ಬಾರಿಯೂ ಶ್ರೀ ಕ್ಷೇತ್ರ ಮಂಜಗುಣಿಯ ವೇಂಕಟರಮಣ ದೇವರ ದರ್ಶನವನ್ನು ಸ್ವರ್ಣವಲ್ಲೀಯ ಉಭಯ ಶ್ರೀಗಳು ಪಡೆದರು. ಪೀಠಾಧಿಪತಿಗಳಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಹಾಗೂ ಕಿರಿಯ ಶ್ರೀಗಳಾದ ಶ್ರೀ ಆನಂದಬೋಧೇಂದ್ರ ಸರಸ್ವತೀ ಸ್ವಾಮಿಗಳು ಶ್ರೀ ವೇಂಕಟರಮಣನಿಗೆ ಪೂಜೆಯನ್ನು ನೆರವೇರಿಸಿದರು. ಪ್ರತಿ ವರ್ಷವೂ ಚಾತುರ್ಮಾಸ್ಯ ವ್ರತ ಸಂಕಲ್ಪದ ಪೂರ್ವಭಾವಿಯಾಗಿ ಪೂಜೆ ಸಲ್ಲಿಸುವುದು ಅನೂಚಾನವಾಗಿ ನಡೆದುಕೊಂಡು ಬಂದಿದೆ. ಕೈಗೊಳ್ಳಲಿರುವ ಚಾತುರ್ಮಾಸ್ಯ ವ್ರತಾಚರಣೆಯು ನಿರ್ವಿಘ್ನವಾಗಿ ನಡೆಯುವಂತೆ ದೇವರಿಗೆ ವಿಶೇಷ ಪೂಜೆ, ಅರ್ಚನೆಗಳನ್ನು ಮಾಡಿ, ಪ್ರಾರ್ಥನೆಯನ್ನು ಸಲ್ಲಿಸಿದರು.