ಮಾಲೂರು: ಶಾಲೆ ಆವರಣದಲ್ಲಿದ್ದ ಸಂಪ್ ನಲ್ಲಿ ಬಿದ್ದು ವಿದ್ಯಾರ್ಥಿ ಸಾವು : ಕಡದನಹಳ್ಳಿಯಲ್ಲಿ ಘಟನೆ
Malur, Kolar | Oct 30, 2025 ಶಾಲೆ ಆವರಣದಲ್ಲಿದ್ದ ಸಂಪ್ ನಲ್ಲಿ ಬಿದ್ದು ವಿದ್ಯಾರ್ಥಿ ಸಾವು  ಮಾಲೂರು ತಾಲ್ಲೂಕು ಕಡದನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದುಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ 3ನೇ ತರಗತಿ ವಿದ್ಯಾರ್ಥಿ ಸುರೇಶ್ (9) ಸಾವನ್ನಪ್ಪಿದ್ದಾನೆ ಗುರುವಾರ ಬೆಳಗ್ಗೆ ಶಾಲೆಗೆ ಬಂದ ವಿದ್ಯಾರ್ಥಿ ನಾಪತ್ತೆಯಾಗಿದ್ದ. ಗ್ರಾಮದಲೆಲ್ಲಾ ಹುಡುಕಾಟ ನಡೆಸಿದ ಪೋಷಕರು ಬಳಿಕ ಸಂಪ್ ನಲ್ಲಿ ಸುರೇಶ್ ಶವ ಪತ್ತೆಯಾಗಿದೆ ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಗುರುವಾರ ಮಧ್ಯಾಹ್ನ 3:00 ಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ