ಶ್ರೀನಿವಾಸಪುರದಲ್ಲಿ ಲಕ್ಷ್ಮೀನರಸಿಂಹಸ್ವಾಮಿ ಲಕ್ಷದೀಪೋತ್ಸವ ಸಂಪನ್ನ ಸ್ವಾಮಿಯ ಭವ್ಯ ಮೆರವಣಿಗೆ ; ಮಾಜಿ ಸ್ಪೀಕರ್ ರಮೇಶ್ಕುಮಾರ್ ಭಾಗಿ ಕೋಲಾರ : ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗವಿರುವ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ಶನಿವಾರ ಲಕ್ಷದೀಪೋತ್ಸವದ ಅಂಗವಾಗಿ ನಡೆದ ಸ್ವಾಮಿಯ ಭವ್ಯ ಪುಷ್ಪಪಲ್ಲಕ್ಕಿ ಮೆರವಣಿಗೆಯಲ್ಲಿ ಮಾಜಿ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್ಕುಮಾರ್ ಮತ್ತಿತರ ಮುಖಂಡರು ಭಾಗವಹಿಸಿದ್ದರು. ಶ್ರೀನಿವಾಸಪುರ ಪಟ್ಟಣ ರಾಜಬೀದಿಗಳಲ್ಲಿ ಸಾಗಿ ಬಂದ ಮೆರವಣಿಗೆಯಲ್ಲಿ ತಮ್ಮ ಬೆಂಬಲಿಗರೊಂದಿಗೆ ಭಾಗವಹಿಸಿದ ರಮೇಶ್ಕುಮಾರ್ ಇದಕ್ಕೂ ಮುನ್ನಾ ಲಕ್ಷ್ಮೀನ