ಮುದ್ದೇಬಿಹಾಳ: ವಿಜಯಪುರ: ಐದು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಯುವಕನ ಬರ್ಬರ ಕೊಲೆ
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ರೂಡಗಿ ಗ್ರಾಮದಲ್ಲಿ 23 ವರ್ಷದ ಗಣೇಶ ಕೋಲಕಾರ ಕೊಲೆಯಾಗಿದ್ದಾನೆ. ಮಲಗಿದ್ದಾಗ ಕುಡಗೋಲಿನಿಂದ ಹಲ್ಲೆ ನಡೆಸಲಾಗಿದೆ. ಪತ್ನಿ ಅಕ್ಷತಾ ಅಲಿಯಾಸ್ ಪೂಜಾ ಪರಾರಿಯಾಗಿದ್ದು, ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಮುದ್ದೇಬಿಹಾಳ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.