ಮಳವಳ್ಳಿ : ವಿದ್ಯುತ್ ಕಾಮಗಾರಿ ನಡೆಯುತ್ತಿದ್ದ ವೇಳೆ ವಿದ್ಯುತ್ ತಗುಲಿ ಕಾರ್ಮಿಕನೋರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆಯೊಂದು ಮಳವಳ್ಳಿ ತಾಲ್ಲೂಕಿನ ಕಲ್ಕುಣಿ ಗ್ರಾಮದ ಬಳಿ ಜರುಗಿದೆ. ಹೆಚ್ ಡಿ ಕೋಟೆ ತಾಲ್ಲೂಕು ಐರಿಜಿ ಗ್ರಾಮದ ವಾಸಿಯಾದ 25 ವರ್ಷದ ನಂದೀಶ ಎಂಬಾತನೇ ಮೃತಪಟ್ಟ ದುರ್ದೈವಿ ಎಂದು ಗೊತ್ತಾಗಿದೆ. ಚೆಸ್ಕಾಂನ ಮಾದರಿ ಗ್ರಾಮ ಯೋಜನೆಯಡಿ ಕಲ್ಕುಣಿ ಗ್ರಾಮದ ಬಳಿಯ ಚಿಕ್ಕಕಲ್ಕುಣಿ ರಸ್ತೆಯಲ್ಲಿ ಗುರುವಾರ ಸಾಯಂಕಾಲ 6.30 ರ ಸಮಯದಲ್ಲಿ ಗುತ್ತಿಗೆದಾರರ ಮೂಲಕ ಹಳೇ ವಿದ್ಯುತ್ ವೈರ್ ಗಳ ಬದಲಾಣೆ ಕಾಮಗಾರಿ ನಡೆ ಯುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ ಎಂದು ಗೊತ್ತಾಗಿದೆ.