ದೇವರಹಿಪ್ಪರಗಿ: ಮಳೆಯ ಅವಾಂತರಕ್ಕೆ ಮೂಡಸಾವಳಗಿ ಗ್ರಾಮದ ಸೇತುವೆ ಮುಳುಗಡೆ ಗ್ರಾಮಸ್ಥರ ಪರದಾಟ
ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಮೂಡಸಾವಳಗಿ ಗ್ರಾಮದಲ್ಲಿ ಮಳೆಯ ಅವಾಂತರಕ್ಕೆ ಗ್ರಾಮದ ಸೇತುವೆ ಸಂಪೂರ್ಣವಾಗಿ ಮುಳುಗಿದ್ದು ವಾಹನ ಸವಾರರು ಹಾಗೂ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ತಡರಾತ್ರಿಯಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ಅವಾಂತರಕ್ಕೆ ಗ್ರಾಮದ ಸೇತುವೆಯು ಸಂಪೂರ್ಣವಾಗಿ ಮುಳುಗಿದ್ದು ವಾಹನಗಳು ಗ್ರಾಮಕ್ಕೆ ಬರೆದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಂಗಳವಾರ ಸಾಯಂಕಾಲ 4ಗಂಟೆ ಸುಮಾರಿಗೆ ಇನ್ನು ಆ ಕಡೆಯ ಗ್ರಾಮಸ್ಥರು ಮೂಡಸಾವಳಗಿ ಗ್ರಾಮಕ್ಕೆ ಬರಲಾರದೆ ಹಳ್ಳದ ದಡದಲ್ಲಿ ಸಿಲುಕಿರುವ ಘಟನೆ ನಡೆದಿದೆ.