ಜಲ ಸಂರಕ್ಷಣೆಯಲ್ಲಿ ಕೋಲಾರ ಜಿಲ್ಲೆಗೆ ರಾಷ್ಟ್ರೀಯ ಪ್ರಶಸ್ತಿ; ೨೫ ಲಕ್ಷ ರೂ.ನಗದು ಬಹುಮಾನ ಕೋಲಾರ ಜಿಲ್ಲೆಗೆ ಜಲ ಸಂಚಯ ಜನ ಭಾಗಿದಾರಿ ಅಭಿಯಾನದಡಿ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಜಲ ಸಂರಕ್ಷಣೆ ಮತ್ತು ಪ್ರಕೃತಿ ಸಂರಕ್ಷಣಾ ಕಾಮಗಾರಿಗಳನ್ನು ಜಿಲ್ಲೆಯಲ್ಲಿ ಉತ್ತಮವಾಗಿ ಅನುಷ್ಠಾನಗೊಳಿಸಲಾಗಿತ್ತು. ನೂರಾರು ಕೆರೆಗಳ ಪುನಶ್ಚೇತನ, ರಾಜಕಾಲುವೆಗಳ ಅಭಿವೃದ್ಧಿ ಮಾಡಲಾಗಿದೆ. ಇದು ಅಂತರ್ಜಲ ವೃದ್ಧಿ ಮತ್ತು ಕೃಷಿಗೆ ನೀರು ಒದಗಿಸಿದೆ. ಜಿಲ್ಲೆಗೆ ೨೫ ಲಕ್ಷ ರೂ. ನಗದು ಬಹುಮಾನವೂ ದೊರಕಿದೆ. ಕೋಲಾರ ಜಿಲ್ಲೆ ಬೆಂಗಳೂರು ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದೆ. ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ನಂಗಲಿ, ಆಲಂಗೂರು, ಅಂಗೋಂಡಹಳ್ಳಿ, ದೇವರಾಯಸಮುದ್ರ, ಮುಡಿಯನೂರು, ಕುರುಡುಮಲೆ, ಶ್ರೀನಿವಾಸಪುರ ತಾಲ್ಲೂ