ಹುಕ್ಕೇರಿ: ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ವಿರುದ್ಧ ನಿಪ್ಪಾಣಿಯಲ್ಲಿ ಪ್ರಚಾರ : ಪಟ್ಟಣದಲ್ಲಿ ಶಾಸಕ ನಿಖಿಲ್ ಕತ್ತಿ ಸವಾಲ್
ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ವಿರುದ್ಧ ನಿಪ್ಪಾಣಿಯಲ್ಲಿ ಪ್ರಚಾರ ಶಾಸಕ ನಿಖಿಲ್ ಕತ್ತಿ ಸವಾಲ್ ಹಾಕಿದ್ದರು. ಹುಕ್ಕೇರಿ ಸಹಕಾರ ಕ್ಷೇತ್ರದಲ್ಲಿ ನಮ್ಮ ಕುಟುಂಬದ ಕೊಡುಗೆ ಅಪಾರವಾಗಿದ್ದು, ಜೊಲ್ಲೆ ವಿನಾಕಾರಣ ರಾಜಕೀಯ ಹಸ್ತಕ್ಷೇಪ ಮಾಡಲು ಬಂದಲ್ಲಿ ತಕ ಪಾಠ ಕಲಿಸುವುದಾಗಿ ಶಾಸಕ ನಿಖಿಲ್ ಕತ್ತಿ ಎಚ್ಚರಿಸಿದರು. ಸೋಮವಾರ ಬೆಳಗ್ಗೆ ಹುಕ್ಕೇರಿ ಪಟ್ಟಣದಲ್ಲಿ ಪ್ರತಿಕ್ರಿಯೆ ನೀಡಿದ ಅವರು. ಸೋತು ಸುಣ್ಣವಾಗಿರುವ ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆಗೆ, ಬರುವ ವಿಧಾನಸಭಾ ಚುನಾವಣೆಯಲ್ಲಿ ನಿಪ್ಪಾಣಿಗೆ ಬಂದು ಪ್ರಚಾರ ಮಾಡುತ್ತೇನೆ ಎಂದು ಹೇಳಿದರು