ಕೆ.ಜಿ.ಎಫ್: ಅಬಕಾರಿ ಇಲಾಖೆ ಅಧಿಕಾರಿಗಳಿಂದ ಕೆಜಿಎಫ್ ಬಸ್ ನಿಲ್ದಾಣದಲ್ಲಿದ್ದ ಬಾರ್ ಗಳಿಗೆ ಬೀಗ
KGF, Kolar | Oct 30, 2025 ಅಬಕಾರಿ ಇಲಾಖೆ ಅಧಿಕಾರಿಗಳಿಂದ ಕೆಜಿಎಫ್ ಬಸ್ ನಿಲ್ದಾಣದಲ್ಲಿದ್ದ ಬಾರ್ ಗಳಿಗೆ ಬೀಗ ಕೆಜಿಎಫ್ ನಗರಸಭೆಯ ಕುವೆಂಪು ಬಸ್ ನಿಲ್ದಾಣದಲ್ಲಿದ್ದ ನಾಲ್ಕು ಬಾರ್ಗಳಿಗೆ ಬೀಗ ಹಾಕಿದ ಅಬಕಾರಿ ಅಧಿಕಾರಿಗಳು. ಬಸ್ ನಿಲ್ದಾಣದ ಪ್ರಯಾಣಿಕರಿಗೆ ನಿತ್ಯ ಕಿರಿಕಿರಿ ಯಾಗುತ್ತಿದ್ದು ಈ ಬಗ್ಗೆ ಕಳೆದ ಎರಡು ತಿಂಗಳ ಹಿಂದಷ್ಟೇ ಶಾಸಕಿ ರೂಪಕಲಾ, ಜಿಲ್ಲಾಧಿಕಾರಿ ಡಿ.ಸಿ.ರವಿ ಹಾಗೂ ಕೆಜಿಎಫ್ ನ್ಯಾಯಾಲಯದ ನ್ಯಾಯಾಧೀಶರು ಬೇಟಿ ನೀಡಿ ಬಾರ್ ಗಳಿಗೆ ಬೀಗ ಹಾಕುವಂತೆ ಸೂಚನೆ ನೀಡಿದ್ದರು ಸಹ ಬಾರ್ ಗಳನ್ನು ನಡೆಸುತ್ತಿದ್ದು ಬಸ್ ನಿಲ್ದಾಣದ ಪ್ರಯಾಣಿಕರಿಗೆ ನಿತ್ಯ ಕಿರಿಕಿರಿ ಯಾಗುತ್ತಿದ್ದ ಹಿನ್ನೆಲೆ ಅಬಕಾರಿ ಇಲಾಖೆ ಅಧಿಕಾರಿಗಳು ಸದ್ಯ ತಾತ್ಕಾಲಿಕವಾಗಿ ಬಾರ್ಗಳನ್ನು ಗುರುವಾರ ರಾತ್ರಿ ಅಮಾನತು ಮಾಡಿ ಬೀಗ ಹಾಕಲಾಗಿದೆ