ಆಡಳಿತ ಪಕ್ಷದ ಸದಸ್ಯರು ಇಂದು ರಾಜ್ಯಪಾಲರನ್ನು ಅಡ್ಡ ಹಾಕಿದ್ದಾರೆ. ರಾಜ್ಯಪಾಲರ ಭಾಷಣಕ್ಕೂ ಅಡ್ಡಿಪಡಿಸಿದ್ದಾರೆ ಎಂದು ಗುರುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ವಿಧಾನಸೌಧದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಅವರು ಆರೋಪಿಸಿದರು. ಸದನದಲ್ಲೇ ಸಂಘರ್ಷದ ವಾತಾವರಣ ನಿರ್ಮಾಣವಾಗಿದೆ. ರೂಲ್ ಬುಕ್‌ನ ಪೇಜ್ 19ರಲ್ಲಿ ರಾಜ್ಯಪಾಲರ ಭಾಷಣದ ಅವಧಿಯಲ್ಲಿ ಪಾಲಿಸಬೇಕಾದ ನಿಯಮಗಳು ಸ್ಪಷ್ಟವಾಗಿ ಉಲ್ಲೇಖವಾಗಿವೆ. ರಾಜ್ಯಪಾಲರು ಬರುವಾಗ, ಹೊರಡುವಾಗ ಹಾಗೂ ಭಾಷಣ ಮಾಡುವ ವೇಳೆ ಯಾವುದೇ ರೀತಿಯ ಅಡ್ಡಿ ಮಾಡಬಾರದು. ಅದಕ್ಕೆ ಅಡ್ಡಿಪಡಿಸಿದರೆ ಅದು ಸದನಕ್ಕೆ ತೋರಿದ ಅಗೌರವ ಎಂದು ಪರಿಗಣಿಸಬೇಕು. ಅಂಥವರನ್ನು ಅಮಾನತು ಮಾಡಬೇಕು ಎಂಬ ನಿಯಮವೂ ಇದೆ.