ರಾಜ್ಯದಲ್ಲಿ ವೈದ್ಯರೊಬ್ಬರು ಸಂಬಳ ಸಿಗದೇ ರಾಜೀನಾಮೆ ನೀಡಿದ ವಿಚಾರಕ್ಕೆ ಸಂಬಂಧಿಸಿ ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮಲ್ಲೇಶ್ವರಂನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಸಿ.ಎನ್.ಅಶ್ಚತ್ಥ್ನಾರಾಯಣ್ ಅವರು, ಸರ್ಕಾರದ ಮೊದಲ ಆದ್ಯತೆ ಶಿಕ್ಷಣ ಹಾಗೂ ಆರೋಗ್ಯ. ಸರ್ಕಾರ ಇಂದು ಶಿಕ್ಷಣ ಮತ್ತು ಆರೋಗ್ಯದಲ್ಲಿ ಒತ್ತನ್ನು ನೀಡಬೇಕು. ಈ ಸರ್ಕಾರ ಕನಿಷ್ಟ ಸಂಬಳ ಕೊಡುತ್ತಿದೆ. ಇಂದು ರಾಜೀನಾಮೆ ನೀಡುವ ಹಂತಕ್ಕೆ ಬಂದಿದೆ. ರಾಜೀನಾಮೆ ಕೊಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಔಷಧಿ ಕೊರತೆ ಸೇರಿದಂತೆ ಅನೇಕ ಸಮಸ್ಯೆ ಇದೆ. 800 ಔಷಧಿ ಮಾತ್ರೆ ಕೊಡಲು ಅವಕಾಶ ಇತ್ತು. ಈಗ ಅದನ್ನು 800 ರಿಂದ 1200 ಔಷಧಿಗಳನ್ನು ಮಾಡಿದ್ದಾರೆ. ಇವರು ಕೊಡಲ್ಲ, ಬೇರೆ ಕಡೆ ತೆಗೆದುಕೊಳ್ಳಲು ಬಿಡುವುದಿಲ್ಲ. ಜನೌಷಧ ಕೇಂದ್ರ ಮುಚ್ಚಲು ಮುಂದಾಗುತ್ತಾ