ಮಂಗಳೂರು: ದಸರಾ ಹುಲಿವೇಷ ಕುಣಿದು ಬಂದ ಹಣವನ್ನು ಬಡ ರೋಗಿಗೆ ನೀಡಿದ ಪುಟಾಣಿಗಳು!
ಬಂಟ್ವಾಳದ ಸಜಿಪ ಪಡು ಗ್ರಾಮದ ಏಳು ವಿದ್ಯಾರ್ಥಿಗಳು ತಾವು ಹುಲಿವೇಷ ಕುಣಿದು ಸಂಗ್ರಹಿಸಿದ ಹಣವನ್ನು, ಐದು ವರ್ಷಗಳಿಂದ ಹಾಸಿಗೆ ಹಿಡಿದಿರುವ ಬಡ ರೋಗಿಯೊಬ್ಬರಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ. ಸ್ವತಃ ಮನೆಯಲ್ಲಿದ್ದ ವಸ್ತುಗಳಿಂದಲೇ ವೇಷ ಸಿದ್ಧಪಡಿಸಿಕೊಂಡು ಈ ಮಕ್ಕಳು ಸಮಾಜಕ್ಕೆ ಮಾದರಿಯಾಗಿದ್ದಾರೆ.