ಚಾಮರಾಜನಗರ:ಜಿಲ್ಲೆಯ ಹನೂರು ತಾಲೂಕಿನ ಲೊಕ್ಕನಹಳ್ಳಿ ಒಡೆಯರಪಾಳ್ಯ ಮುಖ್ಯರಸ್ತೆಯ ಪಕ್ಕದ ಗುಡ್ಡದಲ್ಲಿ ಒಂದೇ ಸಮಯದಲ್ಲಿ ಎರಡು ಚಿರತೆಗಳು ಕಾಣಿಸಿಕೊಂಡ ಘಟನೆ ಸ್ಥಳೀಯರಲ್ಲಿ ಭಯ ಮತ್ತು ಗಾಬರಿಯನ್ನು ಉಂಟುಮಾಡಿದೆ. ಶನಿವಾರ ಮಧ್ಯಾಹ್ನ 3 ಗಂಟೆಯ ವೇಳೆಯಲ್ಲಿ ದಾರಿಹೋಕರು ಬಿಳಿ ಮತ್ತು ಕೆಂಪು ಛಾಯೆ ಕಾಣುವ ಎರಡು ಚಿರತೆಗಳನ್ನು ಗುಡ್ಡದ ಮೇಲ್ಭಾಗದಲ್ಲಿ ವಿರಾಜಮಾನವಾಗಿ ಕುಳಿತಿರುವುದನ್ನು ಗಮನಿಸಿ ತಕ್ಷಣವೇ ಗಾಬರಿಯಾಗಿದ್ದಾರೆ. ಜೋಡಿಯಾಗಿ ಚಿರತೆಗಳು ಸ್ಪಷ್ಟವಾಗಿ ಕಾಣಿಸಿಕೊಂಡುದು ಈ ಪ್ರದೇಶದಲ್ಲಿ ಅಪರೂಪದ ಘಟನೆ ಎನ್ನಲಾಗಿದೆ.ಸಾರ್ವಜನಿಕರಿಗೆ ಯಾವುದೇ ರೀತಿಯ ಅಪಾಯ ಉಂಟಾಗುವ ಮುನ್ನವೇ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದರು