ಬೆಂಗಳೂರು ಉತ್ತರ: ಯಾರು ಎಲ್ಲಿಗಾದರು ಹೋಗಲಿ 22 ಕ್ಕೆ ದಸರಾ ಉದ್ಘಾಟನೆ ಆಗುತ್ತೆ: ನಗರದಲ್ಲಿ ಹೆಚ್.ಸಿ ಮಹದೇವಪ್ಪ
ಇ.ಡಿ ಯಿಂದ ದಿನೇಶ್ ಬಂಧನ ವಿಚಾರಕ್ಕೆ ಸಂಬಂಧಿಸಿ ಬುಧವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಶಿವಾನಂದ ಸರ್ಕಲ್ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಎಚ್ ಸಿ ಮಹದೇವಪ್ಪ ಅವರು, ದಸರಾ ಸಿದ್ದತೆ ಚೆನ್ನಾಗಿ ನಡೆಯುತ್ತಿದೆ, ಏರ್ ಶೋಗೆ ಪಾಸ್ ಮಾಡಿದ್ದರಿಂದ ಯಾರೂ ಬೇಸರಗೊಂಡಿಲ್ಲ. ಏರ್ ಶೋ ಹೆಲಿಕಾಪ್ಟರ್ ಶೋ ಡ್ರೋನ್ ಶೋ ಎಲ್ಲ ಇದೆ ಎಂದರು. ಇನ್ನು ಬಾನು ಮುಷ್ತಾಕ್ ವಿಚಾರದಲ್ಲಿ ಯಾರು ಎಲ್ಲಿಗಾದರೂ ಹೋಗ್ಲಿ, 22 ಕ್ಕೆ ದಸರಾ ಅಂತೂ ಉದ್ಘಾಟನೆ ಆಗುತ್ತದೆಯಲ್ಲ ಆಮೇಲೆ ಎಲ್ಲಿಗಾದರೂ ಹೋಗಲಿ ಎಂದರು.