ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಶುಕ್ರವಾರ ಸಂಜೆ 5 ಗಂಟೆ ಸುಮಾರಿಗೆ ವಿಧಾನಸೌಧದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಎಂಬಿ ಪಾಟೀಲ್ ಅವರಯ, ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಅರ್ಥ ಮಾಡಿಕೊಳ್ಳಿ, ಸಾಮಾಜಿಕವಾಗಿ ಸತೀಶ್ ಜಾರಕಿಹೊಳಿ ಎಸ್ಸಿ ಎಸ್ಟಿ ಜನಾಂಗದವರ ವಿಚಾರವಾಗಿ ಶುರು ಮಾಡುತ್ತಿದ್ದಾರೆ. ಬೆಳಗಾವಿಗೆ ಹೋದಾಗ ಅವರು ಹೇಳಿದ್ದಾರೆ. ಸಿದ್ದರಾಮಯ್ಯ ಸಿದ್ದಾಂತ ಅಹಿಂದ ವರ್ಗ ಅದೇ ರೀತಿ ಸತೀಶ್ ಜಾರಕಿಹೊಳಿ ಮುಂದುವರೆಸುತ್ತಾರೆ. ನಮ್ಮ ನಾಯಕರು ಅಂತ ಹೇಳಿದ್ದಾರೆ. ವಿಜಯಪುರಕ್ಕೆ ಬಂದ್ರೆ ಎಂಬಿ ಪಾಟೀಲ್ ಅಂತಾರೆ. ಅನುಭವ ಮಂಟಪದವರು, ಬಸವಣ್ಣ ಅಂತ ಹೇಳ್ತಿದ್ರು ಎಂದರು.