ಗುಂಡ್ಲುಪೇಟೆ: ಗುಂಡ್ಲುಪೇಟೆಯ ಮಂಚಹಳ್ಳಿ ಗ್ರಾಮದಲ್ಲಿ ಕಾಡಾನೆ ದಾಳಿ: ಬೆಳೆ ನಾಶ, ರೈತರಿಗೆ ಸಂಕಷ್ಟ
-ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಮಂಚಹಳ್ಳಿ ಗ್ರಾಮದಲ್ಲಿ ಕಾಡಾನೆ ದಾಳಿ ಮುಂದುವರಿದಿದ್ದು, ಗ್ರಾಮಸ್ಥರು ನಿತ್ಯವೂ ಕೆಲವು ಪ್ರದೇಶಗಳಲ್ಲಿ ಕಾಡಾನೆ ಹಾವಳಿ ಕಾಣಿಸುತ್ತಿರುವುದಾಗಿ ತಿಳಿಸಿದ್ದಾರೆ. ಇದು ಬೆಳೆ ನಾಶಕ್ಕೆ ಪ್ರಮುಖ ಕಾರಣವಾಗಿದೆ. ಅದರಂತೆಗ್ರಾಮದ ಮಹಾದೇವಪ್ಪ ಅವರಿಗೆ ಸೇರಿದ ಜಮೀನಿಗೂ ಕಾಡಾನೆ ಲಗ್ಗೆ ಹಾಕಿರುವ ಕಾಡಾನೆಗಳು ಟೊಮ್ಯಾಟೊ, ಈರೇಕಾಯಿ, ತೆಂಗಿನ ಬೆಳೆ ಸೇರಿ ಮುಂತಾದವುಗಳನ್ನು ಸಂಪೂರ್ಣ ನಾಶಗೊಳಿಸಿದೆ ರೈತರು ಕಾಡಾನೆ ಹಾವಳಿಯನ್ನು ತಡೆಯಲು ತುರ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು