ಬೆಂಗಳೂರು ಉತ್ತರ: ಬಿಹಾರ ಚುನಾವಣೆ ಎಕ್ಸಿಟ್ ಪೋಲ್ ಉಲ್ಟಾ ಆಗಬಹುದು ಕಾದು ನೊಡೋಣ: ನಗರದಲ್ಲಿ ಮಲ್ಲಿಕಾರ್ಜುನ ಖರ್ಗೆ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬುಧವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಬಿಹಾರ ಚುನಾವಣೆ ಎಕ್ಸಿಟ್ ಪೋಲ್ ಕುರಿತು ಸದಾಶಿವನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ಎಕ್ಸಿಟ್ ಪೋಲ್ ಗಳೆಲ್ಲ ಎನ್.ಡಿ ಎ ಗೆ ಮುನ್ನಡೆ ತೋರಿಸುತ್ತಿದೆ. ಅಷ್ಟು ಮಹಾಘಟ ಬಂದನ್ ಗೆ ಪ್ರೋತ್ಸಾಹ ಇಲ್ಲ ಎಂದು ತೋರಿಸುತ್ತಿದೆ. ಇದೇ ರೀತಿಯಾಗಿ ಹರಿಯಾಣದಲ್ಲಿ ಎಕ್ಸಿಟ್ ಪೋಲ್ ಎಲ್ಲ ಕಾಂಗ್ರೆಸ್ ಗೆ ಬರುತ್ತದೆ ಎಂದು ತೋರಿಸಿದ್ರು. ಆದರೆ ರಿಸಲ್ಟ್ ಉಲ್ಟಾ ಆಗಿ ಬಿಜೆಪಿ ಬಂತು. ಇದನ್ನೂ ಕಾದು ನೋಡೋಣ, ರಿಸಲ್ಟ್ ಬರುವ ತನಕ ಕಾದು ನೋಡೋಣ ಎಂದರು, ಇನ್ನು ಬಾಂಬ್ ಬ್ಲಾಸ್ಟ್ ಬಗ್ಗೆ ನಾವು ತನಿಖೆಗೆ ಕೇಳಿದ್ದೇವೆ. ಸಂಪೂರ್ಣ ತನಿಖೆ ಆಗಲಿ, ಅದರ ಮೇಲೆ ಶಿಕ್ಷೆಯಾಗಲಿ. ಯಾರಿಗೂ ಕೂಡ ದಾಕ್ಷಿಣ್ಯ ತೋರಿಸಬೇಕಿಲ್ಲ.