ಕೋಲಾರ: ತಲೆ ಮೇಲೆ ಕಲ್ಲುಎತ್ತಿ ಹಾಕಿ ನನ್ನ ತಂಗಿಯನ್ನ ಕೊಲೆ ಮಾಡಿದ್ದಾರೆ: ನಗರದಲ್ಲಿ ಚಿಕ್ಕಮುನಿಯಪ್ಪ
Kolar, Kolar | Oct 8, 2025 ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ಚಲುವನಹಳ್ಳಿ ಬಳಿ ಬುಧವಾರ ಬೆಳಗ್ಗೆ ಮಹಿಳೆಯೊಬ್ಬರ ತಲೆ ಮೇಲೆ ಕಲ್ಲುಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಲಾಗಿದೆ.ತಾಲೂಕಿನ ಬೆಳ್ಳೂರು ಗ್ರಾಮದ ಮಾಲಾ (40) ಕೊಲೆಯಾದ ಮಹಿಳೆ. ಕೊಲೆ ಮಾಡಿದ ಆರೋಪಿಗಳು ಪರಾರಿಯಾಗಿದ್ದಾರೆ. ಬೆಳಗ್ಗೆ 6 ಗಂಟೆ ಸುಮಾರಿಗೆ ಆಂಧ್ರಪ್ರದೇಶದ ಬಾಯಿಕೊಂಡಕ್ಕೆ ಹೊಗುತ್ತಿರುವುದಾಗಿ ಹೇಳಿ ಮಹಿಳೆ ಮನೆಯಿಂದ ಹೊರಟಿದ್ದಾರೆ. ನಂತರ ಚಲುವನಹಳ್ಳಿ ಬಳಿ ಶವವಾಗಿ ಪತ್ತೆಯಾಗಿದ್ದಾರೆ. ಸಾವಿನ ಸಂಬಂಧ ಆರಂಭದಲ್ಲಿಸಾಕಷ್ಟು ಅನುಮಾನಗಳು ವ್ಯಕ್ತವಾದವು. ಯಾರೋ ಅಪರಿಚಿತರು ಡಿಕ್ಕಿ ಹೊಡೆದು ಹೋಗಿರಬಹುದು ಎಂಬ ಚರ್ಚೆಗಳು ನಡೆದವು.