ಕೆಜಿಎಫ್ನಲ್ಲಿ ರೌಡಿ ಶೀಟರ್ ಮನೆಗಳ ಮೇಲೆ ಪೊಲೀಸರ ದಾಳಿ ಮುಂಜಾಗೃತ ಕ್ರಮವಾಗಿ ಕೆಜಿಎಫ್ ಪೊಲೀಸ್ರಿಂದ ರೌಡಿ ಆಸಾಮಿಗಳ ಮನೆಗಳ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿ, ಪರಿಶೀಲನೆ ನಡೆಸಿದರು. ರೌಡಿ ಆಸಾಮಿಗಳ ಇರುವಿಕೆಯ ಬಗ್ಗೆ ಹಾಗೂ ಇವರುಗಳು ರೌಡಿ ಕೃತ್ಯಗಳಲ್ಲಿ ಸಕ್ರಿಯವಾಗಿರುವ ಕುರಿತು ಖುದ್ದು ಪರಿಶೀಲನೆ ಮಾಡಿದರು. ಭಾನುವಾರದಂದು ಮುಂಜಾನೆ ಏಕಕಾಲದಲ್ಲಿ ರಾಬರ್ಟ್ಸನ್ಪೇಟೆ, ಆಂಡ್ರಸನ್ಪೇಟೆ, ಬೆಮೆಲ್ನಗರ, ಉರಿಗಾಂ ಮತ್ತು ಬಂಗಾರಪೇಟೆ ಪೊಲೀಸ್ ಠಾಣಾ ಸರಹದ್ದುಗಳಲ್ಲಿನ ೨೩ ರೌಡಿ ಆಸಾಮಿಗಳ ಮನೆಗಳ ಮೇಲೆ ೦೫ ಪೊಲೀಸ್ ಇನ್ಸ್ಪೆಕ್ಟರ್, ೧೫ ಪೊಲೀಸ್ ಸಬ್ಇನ್ಸ್ಪೆಕ್ಟರ್ ಮತ್ತು ೧೨೦ ಮಂದಿ ಪೊಲೀಸ್ ಸಿಬ್ಬಂದಿಗಳಿದ್ದ ೨೩ ತಂಡಗಳವರು ದಾ