ಅಬಕಾರಿ ಇಲಾಖೆ ಲಂಚ ಪ್ರಕರಣಕ್ಕೆ ಸಂಬಂಧಿಸಿದ ಸದನ ಚರ್ಚೆ, ನಿಲುವಳಿ ಸೂಚನೆ ವಿಚಾರಕ್ಕೆ ಸಂಬಂಧಿಸಿ ಶುಕ್ರವಾರ ಸಂಜೆ 5 ಗಂಟೆ ಸುಮಾರಿಗೆ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರು, ನಿಲುವಳಿ ಸೂಚನೆ ತರಲಿ, ಅದರಲ್ಲಿ ನನ್ನ ಪಾತ್ರ ಏನಿದೆ ಹೇಳಲಿ. ನಾನು ಯಾಕೆ ರಾಜೀನಾಮೆ ಕೊಡಬೇಕು? ಯಾವ ಕಾರಣಕ್ಕೆ ರಾಜೀನಾಮೆ ಕೊಡಬೇಕು? ನಾನು ಏನು ತಪ್ಪು ಮಾಡಿದ್ದೇನೆ? ಆಡಿಯೋಗಳು ಸಾಕಷ್ಟು ಜನರದ್ದು ಬರುತ್ತವೆ. ನಾಳೆ ನಿನ್ನದೇ ಅಂತ ಆಡಿಯೋ ಬಂದರೆ ತನಿಖೆ ಮಾಡೋದಾ? ಸರ್ಕಾರದ ವಿರುದ್ಧ ಯಾವಾಗಲೂ ಆಡಿಯೋಗಳು ಬರುತ್ತವೆ, ಅವುಗಳನ್ನು ನಂಬಬಾರದು ಅಂತ ಆಗ ಇವರು ಹೇಳಿದ್ದರು. ಈಗ ಯಾರೋ ಮಾತನಾಡಿದ್ದಾರೆ ಅಂದರೆ ಆಡಿಯೋ ಆಧಾರವಾಗಿ ರಾಜೀನಾಮೆ ಕೊಡಬೇಕಾ? ಎಂದು ಪ್ರಶ್ನಿಸಿದರು.