ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಸೋಮವಾರ ಸಂಜೆ 4 ಗಂಟೆ ಸುಮಾರಿಗೆ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ಕದನ ಅಂತ ಯಾರು ಯುದ್ಧಕ್ಕೆ ಹೊರಟಿಲ್ಲ, ತಮ್ಮ ಹಕ್ಕುಗಳನ್ನು ಕೇಳಿದಕ್ಕೆ ಅವಕಾಶ ಇದೆ ಅದನ್ನ ಪ್ರತಿಪಾದಿಸಿದ್ದಾರೆ. ಅಧಿಕಾರ ಸಿಗಬೇಕು ಅಂತ ಅಂದ್ರೆ ನನಗೆ ಕೊಡಿ ಅಂತ ಕೇಳಲಿಕ್ಕೆ ಹಕ್ಕಿದೆ. ಅದನ್ನ ತಪ್ಪು ಅಂತ ಹೇಳಿಕ್ಕಾಗಲ್ಲ. ಮೊನ್ನೆ ಶಾಂತಿಯುತವಾಗಿ ಸಿಎಂ ಡಿಸಿಎಂ ಇಬ್ಬರು ಚೌಚೌ ಬಾತ್ ತಿಂದಿದ್ದಾರೆ. ರಾಜ್ಯದ ಜನತೆಗೆ ಒಳ್ಳೆ ಸುದ್ದಿ ಕೊಟ್ಟಿದ್ದಾರೆ. ಮುಂದೆ ಯಾವುದೇ ಗೊಂದಲ ಇಲ್ಲದೆ ಮುಂದುವರಿಸಿಕೊಂಡು ಹೋಗುತ್ತಾರೆ ಅಂತ ಭಾವನೆ ನನಗಿದೆ ಎಂದರು.