ದೇವಾಲಯ ಜಮೀನು ಕಬಳಿಕೆ ಆರೋಪ ಆಂಜನೇಯ ಸ್ವಾಮಿ ದೇವಾಲಯದ ಜಮೀನು ಕಬಳಿಕೆ ಮಾಡಲಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ಬೃಹತ್ ಪ್ರತಿಭಟನೆ ನಡೆಸಿದ್ದು, ಈ ವೇಳೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ಘಟನೆ ಶ್ರೀನಿವಾಸಪುರ ತಾಲ್ಲೂಕಿನ ಯಲ್ದೂರು ಗ್ರಾಮದ ಬಳಿ ನಡೆದಿದೆ. ಯಲ್ದೂರು ಗ್ರಾಮದ ಸರ್ವೇ ನಂ. 42ರಲ್ಲಿರುವ ಕಂಬರಾಯಣ ಬೆಟ್ಟದಲ್ಲಿ ಆಂಜನೇಯಸ್ವಾಮಿ ನೆಲೆಸಿದ್ದು, ಈ ಭಾಗದ ಸುಮಾರು 9 ಎಕರೆ ಗೋಮಾಳ ಜಮೀನನ್ನು ದೇವಾಲಯಕ್ಕೆ ಮೀಸಲಿಡಬೇಕೆಂದು ಗ್ರಾಮಸ್ಥರು ಕಳೆದ 13 ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ಆದರೆ, ಇದೇ ಗ್ರಾಮದ ಶಿವಣ್ಣ ಹಾಗೂ ಸೊಣ್ಣೇಗೌಡ ಎಂಬುವವರು ಈ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬುದು ಗ್ರಾ