ಹುಮ್ನಾಬಾದ್: ದತ್ತ ಜಯಂತಿ ಅಂಗವಾಗಿ ಮಾಣಿಕನಗರದ ಮಾಣಿಕಪ್ರಭು ದೇವಸ್ಥಾನದಲ್ಲಿ ಗುರುಪೂಜೆ ಹಾಗೂ ದಕ್ಷಿಣ ದರ್ಬಾರ್
ಈ ಭಾಗದ ಇತಿಹಾಸ ಪ್ರಸಿದ್ಧ ಪವಿತ್ರ ಧಾರ್ಮಿಕ ಕ್ಷೇತ್ರ ಮಾಣಿಕ ನಗರದ ಮಾಣಿಕಪ್ರಭು ದೇವಸ್ಥಾನದಲ್ಲಿ ಬುಧವಾರ ಸಂಜೆ 5ಕ್ಕೆ ಗುರುಪೂಜೆ ಹಾಗೂ ದಕ್ಷಿಣಾ ದರ್ಬಾರ ನೆರವೇರಿತು. ಸಂಸ್ಥಾನದ ಪೀಠಾಧಿಪತಿ ಪೂಜ್ಯ ಡಾ. ಜ್ಞಾನರಾಜ್ ಮಹಾರಾಜರ ದಿವ್ಯ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀಗಳು ಭಕ್ತರಿಗೆ ಆಶೀರ್ವದಿಸಿದರು ಸಂಸ್ಥಾನದ ಕಾರ್ಯದರ್ಶಿ ಆನಂದರಾಜ ಪ್ರಭು, ಚೇತನ್ ರಾಜ್ ಪ್ರಭು ಸೇರಿದಂತೆ ಸಂಸ್ಥಾನ ಈ ಸಂದರ್ಭಕ್ಕೆ ಸಾಕ್ಷಿಯಾದರು