ಯೋಜನಾ ಆಯೋಗದ ಉಪಾಧ್ಯಕ್ಷ ಬಿ ಆರ್ ಪಾಟೀಲ್ ಅವರು ವಿಧಾನಸೌಧದ ಬಳಿ ಶುಕ್ರವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯದ ಸಂಬಂಧಗಳು ಹದಗೆಡುವತ್ತಿವೆ. ಒಕ್ಕೂಟ ವ್ಯವಸ್ಥೆ ದೊಡ್ಡಸವಾಲಾಗಿದೆ. ಅನುದಾನ ಹಂಚಿಕೆ ಒಂದು ಕಡೆ, ಹಲವು ಕಾನೂನು ಬದಲಾವಣೆ ಮಾಡುತ್ತಿದ್ದಾರೆ. ದಕ್ಷಿಣ ಭಾರತದ ಜನಸಂಖ್ಯೆ ಕಡಿಮೆ ಇದೆ, ಉತ್ತರ ಭಾರತದಲ್ಲಿ ಜಾಸ್ತಿ ಇದೆ. ಜನಗಣತಿ ಮುಗಿದ ಮೇಲೆ ಒಂದು ಆತಂಕ ಎದುರಾಗಿದೆ. ಲೋಕಸಭಾ ಸೀಟ್ ಗಳು ಉತ್ತರ ಭಾರತಕ್ಕೆ ಹೆಚ್ಚಾಗಲಿವೆ. ಇದೊಂದು ಆತಂಕ ನಮಗೆ ಎದುರಾಗಲಿದೆ. ಹೀಗಾಗಿ ನಾವು ಒಂದು ಸಭೆ ಮಾಡುತ್ತಿದ್ದೇವೆ, ದಕ್ಷಿಣ ಭಾರತದ ಪ್ರತಿನಿಧಿಗಳು ಈ ಸಭೆಗೆ ಬರ್ತಾರೆ. ಈ ಸಭೆಯಲ್ಲಿ ಗಂಭೀರ ಚರ್ಚೆ ಮಾಡಲಿದ್ದೇವೆ.