ಬಿಹಾರ ಚುನಾವಣೆ ಕುರಿತು, ಶಾಸಕ ಜನಾರ್ದನ್ ರೆಡ್ಡಿ ಅವರು ಶನಿವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ವಿಧಾನಸೌಧದಲ್ಲಿ ಮಾತನಾಡಿ, ಬಿಹಾರ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆದ್ದುಕ್ಲೀನ್ ಸ್ವೀಪ್ ಮಾಡಿದೆ, ಎಕ್ಸಿಟ್ ಪೋಲ್ ಗೂ ಮೀರಿ ಸಾಧನೆ ಮಾಡಿದೆ. ನರೇಂದ್ರ ಮೋದಿ ಕೊಟ್ಟ ಆಡಳಿತಕ್ಕೆ ಜನರು ಆಶೀರ್ವಾದ ಮಾಡಿದ್ದಾರೆ. ಅದಕ್ಕಾಗಿಯೇ ನರೇಂದ್ರ ಮೋದಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಸೋಲನ್ನು ಒಪ್ಕೊಂಡೇ ರಾಹುಲ್ ಗಾಂಧಿ ಇಷ್ಟು ದಿನ ವೋಟ್ ಚೋರಿ ಮಾಡ್ತಿದ್ರು. ಮುಂದೆ ಬಿಹಾರದಂತೆ ಕರ್ನಾಟಕದಲ್ಲಿ ಬಿಜೆಪಿ ಗೆದ್ದು ಅಧಿಕಾರಕ್ಕೆ ಬರಲಿದೆ ಎಂದರು.