ಕೊಳ್ಳೇಗಾಲದ ಮುಡಿಗುಂಡ ಮತ್ತು ಶಂಕನಪುರ ಬಡಾವಣೆಗಳ ಸ್ಲಮ್ ಬೋರ್ಡ್ ಮನೆಗಳಿಗೆ ಇ–ಸ್ವತ್ತು ಮತ್ತು ರಿಜಿಸ್ಟರ್ ಹಕ್ಕುಪತ್ರ ನೀಡಬೇಕೆಂದು ಒತ್ತಾಯಿಸಿ ಮಹಿಳಾ ವಾಸಿಗಳುಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಮಾತನಾಡಿದ ಮಹಿಳೆಯರು ನಾವು ವರ್ಷಗಳಿಂದ ಶಂಕನಪುರದಲ್ಲಿ ವಾಸಿಸುತ್ತಿದ್ದರೂ ನಮ್ಮ ನಿವೇಶನಗಳಿಗೆ ಈವರೆಗೂ ಈ–ಸ್ವತ್ತು, ರಿಜಿಸ್ಟರ್ ಸೇರಿದಂತೆ ಯಾವುದೇ ಹಕ್ಕುಪತ್ರಗಳನ್ನು ನೀಡಿಲ್ಲ. ಅಧಿಕಾರಿಗಳ ಕಚೇರಿಗಳಿಗೆ ಹಲವು ಬಾರಿ ಓಡಾಡುತ್ತಿದ್ದೇವೆ. ಹಕ್ಕುಪತ್ರ ಪಡೆಯಲು ಅಗತ್ಯವಿರುವ ಎಲ್ಲ ದಾಖಲೆಗಳನ್ನು ಸಲ್ಲಿಸಿದ್ದೇವೆ. ಆದರೂ ಕಳೆದ ಮೂರು ವರ್ಷಗಳಿಂದ ಯಾವುದೇ ಸ್ಪಷ್ಟ ಉತ್ತರ ನೀಡದೇ ನಮ್ಮನ್ನು ಅಲೆಸುತ್ತಿದ್ದಾರೆ,ಎಂದು ಅಸಮಾಧಾನ ವ್ಯಕ್ತಪಡಿಸಿದರು