ಹುಕ್ಕೇರಿ: ಪಟ್ಟಣದಲ್ಲಿ ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ ಉಪಾಧ್ಯಕ್ಷರಾಗಿ ಅಜೀತ ಮುನ್ನೋಳಿ ಆಯ್ಕೆ
ಪಟ್ಟಣದಲ್ಲಿ ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ ಉಪಾಧ್ಯಕ್ಷರಾಗಿ ಅಜೀತ ಮುನ್ನೋಳಿ ಆಯ್ಕೆ. ರಾಜ್ಯದ ಗಮನ ಸೆಳೆದು ಭಾರೀ ಸದ್ದು ಮಾಡಿದ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗಳ ಆಯ್ಕೆ ನಡೆಯಿತು. ಮೀಸಲಾತಿ ಇಲ್ಲದ ಕಾರಣ ಹೊಸದಾಗಿ ಚುನಾಯಿತರಾದ 15 ಜನ ನಿರ್ದೇಶಕರೂ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗಳ ಆಕಾಂಕ್ಷಿಯಾಗಿದ್ದಾರೆ. ಆದರೆ, ಮಾಜಿ ಸಂಸದ ರಮೇಶ ಕತ್ತಿ ಮತ್ತು ಮಾಜಿ ಸಚಿವ ಎ.ಬಿ.ಪಾಟೀಲ ಕೈಗೊಳ್ಳುವ ನಿರ್ಣಯವೇ ಅಂತಿಮವಾಗಿದೆ ಬುಧವಾರ ಅಧ್ಯಕ್ಷರಾಗಿ ಮಹಾವೀರ ನಿಲಜಗಿ ಉಪಾಧ್ಯಕ್ಷರಾಗಿ ಅಜೀತ ಮುನ್ನೋಳಿ ಆಯ್ಕೆ ಮಾಡಲಾಗಿದೆ