ಕಳೆದ ಸಾವಿರಾರು ದಿನಗಳಿಂದಲೂ ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ, ರಾಜ್ಯ ಸರ್ಕಾರವನ್ನು ಒತ್ತಾಯಿಸಿ, ಕುಡತಿನಿ ಪಟ್ಟಣದಲ್ಲಿ ಅನಿರ್ದಿಷ್ಟ ಕಾಲದ ಧರಣಿ ನಡೆಸುತ್ತಿರುವ, ಭೂ ಸಂತ್ರಸ್ಥ ರೈತರು ಭಾನುವಾರ ಮಧ್ಯಾಹ್ನ 12ಗಂಟೆಗೆ ಜಿಲ್ಲೆಗೆ ಆಗಮಿಸಿದ್ದ ವಿಧಾನಸಭೆಯ ಸಭಾಪತಿಗಳಾದ ಯು.ಟಿ.ಖಾದರ್ ಅವರನ್ನು ಭೇಟಿ ಮಾಡಿ, ಮನವಿ ಪತ್ರ ಸಲ್ಲಿಸಿದ್ದಾರೆ. ಮಧ್ಯಾಹ್ನ ಜಿಲ್ಲೆಯ ತೋರಣಗಲ್ಲು ಬಳಿಯ ಜಿಂದಾಲ್‌ನ ವಿದ್ಯಾನಗರಕ್ಕೆ ಆಗಮಿಸಿದ್ದ ವಿಧಾನಸಭೆಯ ಸಭಾಪತಿ ಯು.ಟಿ.ಖಾದರ್ ಅವರನ್ನು ಭೂ ಸಂತ್ರಸ್ಥ ರೈತರು ಭೇಟಿ ಮಾಡಿ, ಮನವಿ ಪತ್ರ ಸಲ್ಲಿಸಿದರು. ಕಳೆದ ಮೂರು ವರ್ಷಗಳಿಂದಲೂ ಅನಿರ್ದಿಷ್ಟ ಅವಧಿಯ ಸತ್ಯಾಗ್ರಹ ನಡೆಸುತ್ತಿರುವುದನ್ನು, ರಾಜ್ಯ ಸರ್ಕಾರವು ತಮ್ಮ ಭೂಮಿಗಳನ್ನು ವಶಕ್ಕೆ ಪಡೆದು 15 ವರ್ಷಗಳಾದರೂ, ಯಾವುದೇ ಕಾ