ಬೆಂಗಳೂರು ಉತ್ತರ: ನಗರದಲ್ಲಿ ಜಿಬಿಎ ವ್ಯಾಪ್ತಿಯಲ್ಲಿ “ರಾಜ್ಯೋತ್ಸವ ಪಾದಚಾರಿ ನಡಿಗೆ – 11ಕೆ ಅಭಿಯಾನ
ಬೆಂಗಳೂರು ನಗರದ ಪಾದಚಾರಿ ಮಾರ್ಗಗಳನ್ನು ಸಂಭ್ರಮಿಸಲು ಮತ್ತು ಪಾದಚಾರಿ ಮಾರ್ಗಗಳ ಮಹತ್ವವನ್ನು ಜನರಿಗೆ ತಲುಪಿಸುವ ಸಲುವಾಗಿ “ರಾಜ್ಯೋತ್ಸವ ಪಾದಚಾರಿ ನಡಿಗೆ – 11ಕೆ” ಹೆಸರಿನಲ್ಲಿ ವಿಶಿಷ್ಟ ಅಭಿಯಾನವನ್ನು ಶನಿವಾರ ಸಂಜೆ 6 ಗಂಟೆ ಸುಮಾರಿಗೆ ವಿಧಾನಸೌಧದಿಂದ ಕಬ್ಬನ್ ಪಾರ್ಕ್ ವರೆಗೂ ನಡೆಸಲಾಯಿತು. “ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ)” ಹಾಗೂ ನಗರದ ನಾಗರಿಕರ ಸಹಯೋಗದೊಂದಿಗೆ ಇಂದು ಅಭಿಯಾನ ಹಮ್ಮಿಕೊಂಡಿದ್ದು, ಪಾದಚಾರಿ ಮಾರ್ಗಗಳಲ್ಲಿ ನಡೆದು ಅದರ ಸೌಂದರ್ಯವನ್ನು ಅನುಭವಿಸುವುದು ಹಾಗೂ ಪಾದಚಾರಿ ಮಾರ್ಗದಲ್ಲಿ ಅಡೆತಡೆಗಳಿಲ್ಲದೆ ನಡೆಯಲು ಸಾಧ್ಯವೇ ಎಂಬುದರ ನಿಖರ ಮೌಲ್ಯಮಾಪನ ನೀಡುವುದು ಇದರ ಉದ್ದೇಶವಾಗಿತ್ತು.