ಬೆಂಗಳೂರು ಉತ್ತರ: ಕಿವಿ ನೋವಿಗೆ ಬ್ರೈನ್ ಹ್ಯಾಮರೇಜ್ ಅಂತ ರಿಪೋರ್ಟ್! ಲ್ಯಾಬ್ ರಿಪೋರ್ಟ್ ಕಂಡು ಕುಟುಂಬ ಕಂಗಾಲು! KC ಜನರಲ್ ಆಸ್ಪತ್ರೆ ಮಹಾ ಯಡವಟ್ಟು
kc ಜನರಲ್ ಆಸ್ಪತ್ರೆಗೆ ಕಿವಿನೋವು ಅಂತ ಗಗನ್ ಎನ್ನುವ ಯುವಕ ಬರ್ತಾರೆ. ಆದ್ರೆ ಸಿಟಿ ಸ್ಕ್ಯಾನ್ ಮಾಡಿದಾಗ ಹಿಂದ್ ಲ್ಯಾಬ್ ಮಾಡಿದ ಯಡವಟ್ಟು ಯುವಕನಿಗೆ ಬ್ರೈನ್ ಹ್ಯಾಮರೇಜ್ ಅಂತ ರಿಪೋರ್ಟ್ ಕೊಟ್ಟು ಇಡೀ ಕುಟುಂಬ ಕುಗ್ಗಿಸುವ ಕೆಲಸ ಮಾಡಿದ್ದಾರೆ. ಇದರಿಂದ ಯುವಕನ ಆರೋಗ್ಯದ ಮೇಲೆ ನೆಗೆಟಿವ್ ಎಫೆಕ್ಟ್ ಬೀರುತ್ತಿದ್ದು ಇಡೀ ಕುಟುಂಬ ಕಂಗಾಲಾಗಿದೆ. KC ಜನರಲ್ ಆಸ್ಪತ್ರೆ ನವೆಂಬರ್ 5 ಸಂಜೆ 6 ಗಂಟೆ ಸುಮಾರಿಗೆ ಘಟನೆ ಮುನ್ನೆಲೆಗೆ ಬಂದಿದೆ.