ಬೆಂಗಳೂರು ಗ್ರಾಮಾಂತರ ಜಿಲ್ಲೆ ಯ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯ ಕೊಡಿಗೆಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆಂಚನಪುರ ಗ್ರಾಮದಲ್ಲಿ ಇತ್ತೀಚೆಗಷ್ಟೇ ಸಂಸದ ಡಾ. ಕೆ ಸುಧಾಕರ್ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಭೂಮಿ ಪೂಜೆಯನ್ನು ನೆರವೇರಿಸಿದ್ದರು ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಗ್ರಾಮಸ್ಥರು ಸ್ಥಳೀಯ ಗ್ರಾಮ ಪಂಚಾಯತಿ ಸದಸ್ಯರನ್ನು ಕೂಡ ಆಹ್ವಾನಿಸದೆ ಸಂಸದರು ನೀರಿನ ಘಟಕ ಸ್ಥಾಪಿಸಲು ಹೊರಟಿದ್ದಾರೆ ಕೇವಲ 3-4 ಮನೆಗಳಿಗಷ್ಟೇ ಈ ಘಟಕ ಸ್ಥಾಪನೆ ಸೀಮಿತವಾಗುತ್ತದೆ ಸುಮಾರು 80ಕ್ಕೂ ಹೆಚ್ಚು ಮನೆಗಳಿರುವ ದಲಿತ ಕಾಲೋನಿ ಗೆ ಘಟಕ ಸ್ಥಾಪಿಸಬೇಕಿತ್ತು ಎಂದು ವಿರೋಧ ವ್ಯಕ್ತಪಡಿಸಿದ್ದಾರೆ