ಕಾಂಗ್ರೆಸ್ ನಲ್ಲಿ ಅಧಿಕಾರಕ್ಕಾಗಿ ಜಟಾಪಟಿ ವಿಚಾರಕ್ಕೆ ಸಂಬಂಧಿಸಿ ವಿಧಾನಸೌಧದಲ್ಲಿ ಶುಕ್ರವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಶಾಸಕ ಪ್ರಕಾಶ್ ಕೋಳಿವಾಡ ಅವರು ಮಾತನಾಡಿ, ಖರ್ಗೆ ಸಾಹೇಬರು ಇದನ್ನೆಲ್ಲಾ ಸರಿ ಮಾಡ್ತಾರೆ, ಕೆಲಸದ ನಿಮಿತ್ತವಷ್ಟೇ ಸತೀಶ್ ಜಾರಕಿಹೊಳಿ ಅವರನ್ನ ಭೇಟಿ ಆಗಿದ್ದೆ. ಕಮಿಟಿ ಮೀಟಿಂಗ್ ಇದ್ರಷ್ಟೇ ಬರ್ತೇನೆ. ಅಪಾರ್ಥ ಕಲ್ಪಿಸೋದು ಬೇಡ. ಆದಷ್ಟುಬೇಗ ಈ ಗೊಂದಲಕ್ಕೆ ಇದಕ್ಕೆ ಇತಿಶ್ರೀ ಹಾಡ್ತಾರೆ. ಡಿಕೆ ಸುರೇಶ್ ಹೇಳಿದಾರೆ. ಹೈಕಮಾಂಡ್ ಮುಂದೆ ಹೇಳಿದ್ರೆ ಅವರು ನಿರ್ಧಾರ ಮಾಡ್ತಾರೆ. ಶಾಸಕರ ನಿರ್ಧಾರ ತಗೋತಾರೆ ಆದ್ರೆ ಅಂತಿಮವಾಗಿ ಹೈಕಮಾಂಡ್ ನಿರ್ಧಾರ ಮಾಡೋದು, ಹಿಂದೆ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗಲೂ ಸ್ವಾಮೀಜಿಗಳು ಇದೇ ರೀತಿ ಹೇಳಿದ್ರು.