ಉಡುಪಿ: ತಡರಾತ್ರಿ ಮಾನಸಿಕ ಖಿನ್ನತೆಯ ವ್ಯಕ್ತಿಯ ರಕ್ಷಣೆ
Udupi, Udupi | Sep 15, 2025 ಹಿರಿಯಡ್ಕ ಪೆರ್ಡೂರಿನ ಮುಖ್ಯ ರಸ್ತೆಯಲ್ಲಿ ತಡರಾತ್ರಿ ಮಾನಸಿಕ ಖಿನ್ನತೆಯ ವ್ಯಕ್ತಿ ಬಿದ್ದುಕೊಂಡಿದ್ದು ವಿಷಯ ತಿಳಿದ ವಿಶು ಶೆಟ್ಟಿ ಅಂಬಲಪಾಡಿ ಪೆರ್ಡೂರಿನ ಯುವಕರ ಸಹಾಯದಿಂದ ರಕ್ಷಿಸಿ, ಮಂಜೇಶ್ವರದ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರ ಸ್ನೇಹಾಲಯಕ್ಕೆ ದಾಖಲಿಸಿದ ಘಟನೆ ನಡೆದಿದೆ. ರಕ್ಷಿಸಲ್ಪಟ್ಟ ವ್ಯಕ್ತಿ ತಮಿಳುನಾಡು ಮೂಲದ ಅರ್ಜುನ್ (45) ಹೆಚ್ಚಿನ ವಿವರ ತಿಳಿದು ಬಂದಿಲ್ಲ. ಕಾರ್ಮಿಕರಾಗಿ ಬಂದಿರುವ ಬಗ್ಗೆ ಮೇಲ್ನೋಟಕ್ಕೆ ಕಾಣುತ್ತದೆ. ರಾತ್ರಿ ರಕ್ಷಣೆ ಮಾಡಿರುವುದರಿಂದ ಸಂಭಾವ್ಯ ಅಪಘಾತದ ಅನಾಹುತ ತಪ್ಪಿದೆ.