ಸೇಡಂ: ಸೇಡಂ ಪಟ್ಟಣದಲ್ಲಿ ಅನುಮತಿ ನಿರಾಕರಣೆ ಮಧ್ಯೆ ಪಥಸಂಚಲನ ಮಾಡ್ತಿದ್ದ ಆರ್ಎಸ್ಎಸ್ ಕಾರ್ಯಕರ್ತರು ಪೊಲೀಸ್ ವಶಕ್ಕೆ
ಕಲಬುರಗಿ : ಅನುಮತಿ ನಿರಾಕರಣೆ ಮಧ್ಯೆ ಪಥಸಂಚಲನ ಮಾಡ್ತಿದ್ದ ಸಾವಿರಾರು ಜನ ಆರ್ಎಸ್ಎಸ್ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದ ಘಟನೆ ಕಲಬುರಗಿ ಜಿಲ್ಲೆ ಸೇಡಂ ಪಟ್ಟಣದಲ್ಲಿ ಅ19 ರಂದು ಸಂಜೆ 5 ಗಂಟೆಗೆ ನಡೆದಿದೆ.. ಅನುಮತಿ ನಿರಾಕರಣೆ ಮಧ್ಯೆ ಸಾವಿರಾರು ಜನ ಆರ್ಎಸ್ಎಸ್ ಕಾರ್ಯಕರ್ತರು ಇಂದು ಪಟ್ಟಣದ ಮಾತೃಛಾಯ ಶಾಲೆಯಿಂದ ಪಥಸಂಚಲನ ಹೊರಟಿದ್ದರು. ಈ ವೇಳೆ ಪಥಸಂಚಲನ ಹೊರಟಿದ್ದ ಆರ್ಎಸ್ಎಸ್ ಕಾರ್ಯಕರ್ತರನ್ನ ಪೊಲೀಸರು ತಡೆದು ಬಸ್ನಲ್ಲಿ ಬಲವಂತವಾಗಿ ಕರೆದುಕೊಂಡು ಹೋಗಿದ್ದಾರೆ...