ಬೆಂಗಳೂರು ಉತ್ತರ: ಪ್ರತಾಪ್ ಸಿಂಹ ನಮ್ಮ ತಾಯಿ ಸೀತೆಯಷ್ಟೇ ಶ್ರೇಷ್ಟಳು, ಕ್ಷಮೇ ಕೇಳು ನೀನು: ನಗರದಲ್ಲಿ ಶಾಸಕ ಪ್ರದೀಪ್ ಈಶ್ವರ್
ಶಾಸಕ ಪ್ರದೀಪ್ ಈಶ್ವರ್ ಅವರು ಶನಿವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಕುರಿತಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ನನ್ನ ತಾಯಿ ಬಗ್ಗೆ ಪ್ರತಾಪ್ ಅವಮಾನ ಮಾಡಿದ್ರು. ನಮ್ಮ ತಾಯಿ ಹೆಸರು ಮಂಜುಳಾ, ಅವರು ರಣಬೇಟೆಗಾರನನ್ನ ಕೊಟ್ಟ ತಾಯಿ. ಅಕಾಶದಲ್ಲಿದ್ದವರನ್ನ ಭೂಮಿಗೆ ಇಳಿಸಿದ ಮಗನನ್ನ ಕೊಟ್ಟವರು. ಪ್ರತಾಪ್ ಸಿಂಹ ನೀನು ನಮ್ಮ ತಾಯಿನ ಕ್ಷಮೆ ಕೇಳಬೇಕು. ನಮ್ಮ ತಾಯಿ ಚಾಮುಂಡಿಯಷ್ಟೇ ಶ್ರೇಷ್ಟಳು. ಸೀತಾ ಮಾತೆಯಷ್ಟೇ ನಮ್ಮ ತಾಯಿ ಶ್ರೇಷ್ಠಳು. ಅವರ ಬಗ್ಗೆ ನೀನು ಮಾತನಾಡ್ತೀಯ ನಮ್ಮ ಬಗ್ಗೆ ಲಾಡ್, ಪ್ರಿಯಾಂಕ್ ಬಗ್ಗೆ ಮಾತನಾಡ್ತೀಯ. ಏಕವಚನದಲ್ಲಿ ಎಲ್ಲರ ಬಗ್ಗೆ ಮಾತನಾಡ್ತೀಯ. ಸಿಎಂ,ಡಿಸಿಎಂ ಬಗ್ಗೆಯೂ ಏಕವಚನದಲ್ಲಿ ಮಾತನಾಡ್ತೀಯ. ಅದಕ್ಕೆ ನಾನು ಮಾತನಾಡಿದ್ದು.