ಬೆಂಗಳೂರು ಉತ್ತರ: ಸರ್ವೇ ಹೆಸರಲ್ಲಿ ಸರ್ಕಾರ ವೀರಶೈವ ಲಿಂಗಾಯತ ಸಮುದಾಯ ಒಡೆಯುವ ಕೆಲಸ ಮಾಡುತ್ತಿದೆ: ನಗರದಲ್ಲಿ ಬಿ.ವೈ ವಿಜಯೇಂದ್ರ
ವೀರಶೈವ ಸಮುದಾಯದ ವಿಚಾರಕ್ಕೆ ಸಂಬಂಧಿಸಿ ಮಂಗಳವಾರ ಮಧ್ಯಹ್ನ ಶಿವಾನಂದ ಸರ್ಕಲ್ ಬಳಿ ಸಭೆ ನಡೆಸಿ, ನಂತರ ಮಧ್ಯಾಹ್ನ 2:45 ರ ಸುಮಾರಿಗೆ ಮಾಧ್ಯಮಗಳ ಜೊತೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು, ವೀರಶೈವ ಸಮುದಾಯ ಒಡೆಯುವ ಪ್ರಯತ್ನ ಸಿದ್ದರಾಮಯ್ಯ ಈ ಹಿಂದೆ ಸಹ ಮಾಡಿದ್ರು. ಈಗ ಅದರ್ಸ್ ಕಾಲಮ್ ಇಟ್ಟಿದ್ದಾರೆ. ಈಗ ಹೊಸ ರೂಪ ಕೊಟ್ಟಿದ್ದಾರೆ, ಸರ್ವೆ ಹೆಸರಲ್ಲಿ ವೀರಶೈವ ಲಿಂಗಾಯತ ಒಡೆಯುವ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ. ಇವತ್ತು ಸಮಗ್ರ ಚರ್ಚೆ ಆಗಿದೆ ನಮ್ಮಲ್ಲಿ ಗೊಂದಲ ಇಲ್ಲ. ಸಮಾಜದಲ್ಲಿ ಇರುವ ಗೊಂದಲ ಬಗೆಹರಿಸಬೇಕು. ಅದಕ್ಕಾಗಿ ವೀರಶೈವ ಪ್ರಮುಖರ ಜೊತೆ ಚರ್ಚೆ ಮಾಡಬೇಕು