ದ್ವೇಷ ಭಾಷಣ ಮಸೂದೆಗೆ ಬಿಜೆಪಿ ವಿರೋಧ ವಿಚಾರಕ್ಕೆ ಸಂಬಂಧಿಸಿ ಸೋಮವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಸದಾಶಿವನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಪರಮೇಶ್ವರ್ ಅವರು ಯಾರನ್ನೋ ಟಾರ್ಗೆಟ್ ಮಾಡಿ ಈ ಮಸೂದೆ ತಂದಿಲ್ಲ. ಯಾರು ದ್ವೇಷ ಭಾಷಣ ಮಾಡ್ತಾರೋ ಅವರಿಗೆ ಇದು ಅನ್ವಯ ಆಗುತ್ತೆ. ಯಾರನ್ನೋ ಉದ್ದೇಶ ಇಟ್ಕೊಂಡು ಇದನ್ನು ತಂದಿಲ್ಲ. ಕಾನೂನಿಗೆ ಗೌರವ ಕೊಡಬೇಕು. ದ್ವೆಷ ಭಾಷಣಗಳನ್ನು ಹತ್ತಿಕ್ಕಬೇಕು ಅಂತ ಸುಪ್ರೀಂಕೋರ್ಟ್ ಆದೇಶ ಕೊಟ್ಟಿದೆ. ಅನೇಕ ಘಟನೆಗಳು ನಡೆದಿವೆ, ಕೊಲೆಗಳು ನಡೆದಿವೆ. ಇದನ್ನೆಲ್ಲ ನಿಲ್ಲಿಸಬೇಕು. ಬಿಜೆಪಿಯನ್ನು ದೃಷ್ಟಿಯಲ್ಲಿ ಇಟ್ಕೊಂಡು ಇದನ್ನು ತಂದಿಲ್ಲ. ಇದರಲ್ಲಿ ಬಿಜೆಪಿ ರಾಜಕಾರಣ ಮಾಡಲು ಹೊರಟಿದ್ದಾರೆ ಎಂದರು.