ಡಿ.12,ಶುಕ್ರವಾರ ಬೆಳಿಗ್ಗೆ 11ಕ್ಕೆ, ಬಳ್ಳಾರಿ ಜಿಲ್ಲೆಯ ಕಂಪ್ಲಿ ಪಟ್ಟಣದ ನೀರಾವರಿ ಇಲಾಖೆಯ ಹೊರಗುತ್ತಿಗೆ ನೌಕರರು ತಮ್ಮ ವೇತನ ಬಾಕಿ ಉಳಿದಿರುವ ವಿಷಯಕ್ಕೆ ಸಂಬಂಧಿಸಿ ನೀರಾವರಿ ಕಚೇರಿ ಮುಂದೆ ಧರಣಿ ನಡೆಸಿದರು. ನೌಕರರಿಗೆ 2024ರ ಡಿಸೆಂಬರ್ ತಿಂಗಳ ವೇತನ ಹಾಗೂ ಅಕ್ಟೋಬರ್–ನವೆಂಬರ್ 2025ರ ವೇತನ ಬಿಡುಗಡೆ ಆಗಬೇಕಿದ್ದರೂ ಇನ್ನೂ ಆಗದಿರುವುದರಿಂದ ಅಸಮಾಧಾನ ವ್ಯಕ್ತಪಡಿಸಿದರು. ವೇತನ ಬಿಡುಗಡೆ ಮಾಡುವಂತೆ ಹಾಗೂ ಸಮಸ್ಯೆಗೆ ತಕ್ಷಣದ ಪರಿಹಾರ ನೀಡುವಂತೆ ನೌಕರರು ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.