ಹಣ ದ್ವಿಗುಣ ಮಾಡಿ ಕೊಡುತ್ತೇವೆ ಎಂದು ನಂಬಿಸಿ ವಂಚನೆ ಮಾಡಿದ ಆರೋಪಿಗಳ ವಿರುದ್ಧ ಕೊಳ್ಳೇಗಾದಲ್ಲಿ ಮಹಿಳೆಯೋರ್ವೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಮೈಸೂರು ಮೂಲದ ಹಾರ್ಟ್ ಅಕಾಡೆಮಿ ಸಂಸ್ಥೆಯ ಕೋಮಲೇಶ್ ಮತ್ತು ಸರೋಜ ಎಂಬವರು ಈ ವಂಚನೆಯ ಆರೋಪಿಗಳಾಗಿದ್ದಾರೆ. ಮಧುವನಹಳ್ಳಿ ಗ್ರಾಮದ ನಿವಾಸಿ ಮಮತ ಅವರು ಪೊಲೀಸರಿಗೆ ದೂರು ನೀಡಿದ್ದು, ಕೊಳ್ಳೇಗಾಲ ಪಟ್ಟಣದ ದಕ್ಷಿಣ ಬಡಾವಣೆಯಲ್ಲಿ “ಹಾರ್ಟ್ ಅಕಾಡೆಮಿ” ಹೆಸರಿನ ಸಂಸ್ಥೆಯ ಮೂಲಕ ಮಹಿಳೆಯರಿಂದ ಹಣವನ್ನು ವಂಚಿಸಿದ್ದಾರೆ ಎಂದು ಹೇಳಲಾಗಿದೆ.