ಷಷ್ಠಿ ಪೂಜೆ ಅಂಗವಾಗಿ ಮದ್ದೂರು ತಾಲ್ಲೂಕು ಹೆಚ್.ಹೊಸೂರು ಗ್ರಾಮದ ನಾಗಸುಬ್ರಮಣ್ಯಸ್ವಾಮಿ, ಮಂಡ್ಯದ ಡಿ.ಸಿ.ಕಛೇರಿ ಹಿಂಭಾಗವಿರುವ ಸುಭ್ರಮಣ್ಯಸ್ವಾಮಿ, ಮಳವಳ್ಳಿ ತಾಲ್ಲೂಕಿ ವೀರಭದ್ರೇಶ್ವರ ದೇವಸ್ಥಾನದ ಬಳಿ ಇರುವ ಹುತ್ತಕ್ಕೆ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿತು. ಮದ್ದೂರು ತಾಲ್ಲೂಕು ಎಚ್.ಹೊಸೂರು ಗ್ರಾಮದಲ್ಲಿ ಷಷ್ಠಿ ಪೂಜೆ ಅಂಗವಾಗಿ ನಾಗಸುಬ್ರಮಣ್ಯಸ್ವಾಮಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ದೇಶಿ ಪ್ರೋಡಕ್ಟ್ ಮಾಲೀಕರಾದ ಶಿವಮ್ಮದೇವರಾಜು ಅವರ ಸೇವಾರ್ಥದಲ್ಲಿ ಬೆಳಿಗ್ಗೆಯಿಂದ ನಾಗಸುಭ್ರಮಣ್ಯಸ್ವಾಮಿ ದೇವರಿಗೆ ಹೋಮ-ಹವನ, ಗಣೇಶಪೂಜೆ, ಅಭಿಷೇಕ ಪೂಜೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಜರುಗಿತು.