ವಿಧಾನಸೌಧದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಅಫಿಡವಿಟ್ ನಲ್ಲಿ ವಾಚ್ ಬಗ್ಗೆ ಮಾಹಿತಿ ಹಾಕಿಲ್ಲ ಎಂದ ಛಲವಾದಿ ನಾರಾಯಣ ಸ್ವಾಮಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಗುರುವಾರ ರಾತ್ರಿ 7 ಗಂಟೆ ಸುಮಾರಿಗೆ ಮಾಧ್ಯಮಗಳ ಜೊತೆ ಮಾತನಾಡಿ, ಯಾರು ಹೇಳಿದ್ದು ? ಅವರಿಗೆ ಏನು ಗೊತ್ತು. ಅವರಿಗೆ ಏನು ಗೊತ್ತು ಅಂತಾ? ನನ್ನ ಅಫಿಡೇವಿಡ್ ನನಗೆ ಗೊತ್ತು. ನಾನು ಕಾಸ್ ಕೊಟ್ಟಿರೋದು ನನಗೆ ಗೊತ್ತು. ನನ್ನ ಕ್ರೆಡಿಟ್ ಕಾರ್ಡ್ ಬಳಸಿರೋದು ನನಗೆ ಗೊತ್ತು. ನಾನು ಅಷ್ಟು ಪಾರದರ್ಶಕವಾಗಿ ಎಲ್ಲವನ್ನೂ ಹೇಳಿದ್ದೇನೆ. ರೋಲೆಕ್ಸ್ ವಾಚ್ ನನ್ನ ಬಳಿ ಇರೋದು ಹೇಳಿದ್ದೇನೆ. ಈಗ ಕಟ್ಟಿರೋ ವಾಚ್ ಬಗ್ಗೆಯೂ ಹೇಳಿದ್ದೇನೆ, ಅರ್ಥ ಆಯ್ತಾ? ನಾನು ನಾರಾಯಣ ಸ್ವಾಮಿ ಹತ್ತಿರ ಕಲಿಯಬೇಕಿರೋದು ಏನು ಇಲ್ಲ ಎಂದರು.