ಬೆಂಗಳೂರು ಉತ್ತರ: ಜಾತಿ ಗಣತಿ ಮುಂದೂಡಬೇಕು: ನಗರದಲ್ಲಿ ಸಿ.ಟಿ ರವಿ
ಒಕ್ಕಲಿಗ ಸಮುದಾಯದ ಸಭೆ ಬಳಿಕ ವಿಜಯನಗರದಲ್ಲಿ ಶನಿವಾರ ಮಧ್ಯಾಹ್ನ 3:40 ರ ಸುಮಾರಿಗೆ ಮಾಧ್ಯಮಗಳ ಜೊತೆ ಮಾತನಾಡಿದ ಎಂಎಲ್ ಸಿ ಸಿಟಿ ರವಿ ಅವರು, ಮೊದಲು 877 ಜಾತಿಗಳು ಇದ್ದವು, ಕಾಂತರಾಜ ಆಯೋಗದ ವರದಿ ಬಂದ ಬಳಿಕ 1511 ಜಾತಿ ಮಾಡಿದ್ರು, 212 ಜಾತಿ ಹೆಚ್ಚು ಮಾಡಿದ್ದಾರೆ. ಜಾತಿ ಹೆಚ್ಚು ಮಾಡಲು ಯಾರು ಅಧಿಕಾರ ಕೊಟ್ಟವರು ಇವರಿಗೆ ಎಂದರು. ಜಾತಿ ಕಳ್ಳತನವಾಗಿದೆ, ಮತ್ತೊಂದು ಕಡೆ ಸೇರಿಸುವ ಪ್ರಯತ್ನವಾಗಿದೆ. ನವರಾತ್ರಿ ಉಪವಾಸ ಇರುತ್ತೆ, ಶಿಕ್ಷಕರು ಮನೆದೇವರಿಗೆ ಹರಿಕೆ ಕಟ್ಟಿಕೊಂಡಿರುತ್ತಾರೆ. ಉಪವಾಸ ಇದ್ದವರು ಹೇಗೆ ನಡೆದುಕೊಂಡು ಹೋಗಿ ಸರ್ವೆ ಮಾಡ್ತಾರೇ. ಜಾತಿಗಣತಿಯನ್ನು ಮುಂದೂಡಬೇಕು ಎಂದರು.